ಭ್ರಷ್ಟಾಚಾರದ ವಿಶ್ವರೂಪ

"ಭ್ರಷ್ಟಾಚಾರದ ವಿಶ್ವರೂಪ"  -  ಚಕ್ರವರ್ತಿ ಸೂಲಿಬೆಲೆ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ












“ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ‘ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ.

23/03/2014 ರಂದು ಸಂಜೆ ಅಭಿರುಚಿಯ ತಿಂಗಳ ಕಾರ್ಯಕ್ರಮ .

 ಶ್ರೀಯುತ ವೈದ್ಯ ಅವರಿಂದ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ.
ಅಧ್ಯಕ್ಷತೆ ಡಾ . ಶಿವರಾಮಕೃಷ್ಣ


 ಶ್ರೀಯುತ ವೈದ್ಯರವರು ಶಿವಮೊಗ್ಗದ ಜನರಿಗೆ ಚಿರಪರಿಚಿತರು. ಬಹುಮುಖ ಪ್ರತಿಭೆಯ ಇವರು ಪತ್ರಿಕೋದ್ಯಮಿ,ರಂಗಕರ್ಮಿ,ಅತ್ಯುತ್ತಮ ಛಾಯಾಗ್ರಾಹಕರು ಮತ್ತು ಶಿವಮೊಗ್ಗ ಜಿಲ್ಲೆ ಬೆಳ್ಳಿಮಂಡಲದ ಸಂಸ್ಥಾಪಕ ಸಂಚಾಲಕರು.

ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ  ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ  ಜ್ಯೂರಿಯಾಗಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವ್ಯಕ್ತಿ ಎನ್ನುವ ಹೆಗ್ಗಳಿಕೆ ಇವರದು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ನಡೆಸಬೇಕಾದ ಅಗತ್ಯತೆ ಮತ್ತು ಜ್ಯೂರಿಯಾಗಿ ಅಲ್ಲಿ ತಮಗಾದ ನೂತನ ಅನುಭವಗಳ ಬಗ್ಗೆ ಒಂದು ಸುಂದರ ಚಿತ್ರವನ್ನು ನಮ್ಮ ಮುಂದೆ ತೆರೆದಿಟ್ಟರು. ದೇಶ ವಿದೇಶಗಳ ನೂರಕ್ಕೂ ಹೆಚ್ಚು ಸಿನೆಮಾಗಳನ್ನು ನೋಡುವ ಅವಕಾಶ ಇದರಿಂದ ನಮಗೆ ಲಭ್ಯವಾಗುತ್ತದೆ. ಕನ್ನಡ ಚಿತ್ರರಂಗದ ಗುಣಮಟ್ಟದ ಸುಧಾರಣೆಗೆ ಮತ್ತು ಬೆಳವಣಿಗೆಗೆ ಇಂತಹ ಚಲನಚಿತ್ರೋತ್ಸವಗಳು ಬಹಳ ಸಹಕಾರಿ ಎಂದು ಹೇಳಿದರು.ಚಲನಚಿತ್ರಗಳನ್ನು ಬರೀ ನೋಡಬಾರದು ಓದಬೇಕು ಎನ್ನುವ ಅವರ ಅಭಿಪ್ರಾಯ ನಿಜವೆನ್ನಿಸಿತು. ಒಂದು ಉತ್ತಮ ಚಿತ್ರವೆಂದರೆ, ಅದನ್ನು ವೀಕ್ಷಿಸಿದ ಸ್ವಲ್ಪ ದಿನಗಳಮಟ್ಟಿಗಾದರೂ ಅದು ನಮ್ಮನ್ನು ಕಾಡತ್ತಿರಬೇಕು.   ಒಂದು ಸಿನೆಮಾವನ್ನು ಅರ್ಥೈಸಿಕೊಳ್ಳಲು ಭಾಷೆ ಎಂದೂ ತೊಡಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.