ಕಾವ್ಯವಾಚನ,ವಿಶೇಷ ವ್ಯಾಖ್ಯಾನ ಮತ್ತು ಕನ್ನಡ ಅಷ್ಟಾವಧಾನ ಕಾರ್ಯಕ್ರಮ

"ಆಭಿರುಚಿ" ಸಂಸ್ಥೆಯು ತನ್ನ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಕಾವ್ಯವಾಚನ,ವಿಶೇಷ ವ್ಯಾಖ್ಯಾನ  ಕಾರ್ಯಕ್ರಮಗಳನ್ನು ನವೆಂಬರ್ 12,13  2010 ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಂಡಿತ್ತು.

"ಕುಮಾರವ್ಯಾಸನು ರೂಪಿಸಿದ ದ್ರೌಪದಿ"ಯ ಪಾತ್ರ ಕುರಿತು
ವಿಶೇಷ ವ್ಯಾಖ್ಯಾನ ಶತಾವಧಾನಿ ಡಾ.ಆರ್ .ಗಣೇಶ್ ಅವರಿಂದ
ಕಾವ್ಯವಾಚನ - ಶ್ರೀ ಹೆಚ್. ಚಂದ್ರಶೇಖರ ಕೆದ್ಲಾಯ, ಬ್ರಹ್ಮಾವರ

ಮತ್ತು

ಶತಾವಧಾನಿ ಡಾ.ಆರ್ .ಗಣೇಶ್ ಅವರಿಂದ
ಕನ್ನಡ ಅಷ್ಟಾವಧಾನ ಕಾರ್ಯಕ್ರಮವನ್ನು ನವೆಂಬರ್ 14 ,2010 ರಂದು ಏರ್ಪಡಿಸಿತ್ತು.

ಈ ಮೂರು ದಿನಗಳ ಕಾರ್ಯಕ್ರಮಗಳು ಶಿವಮೊಗ್ಗದ ಜನತೆಯ ಮನದಲ್ಲಿ ಉಳಿಯುವಂತಹವಾಗಿದ್ದುವು. ಶ್ರೀ ಗಣೇಶ್ ಅವರ ವ್ಯಾಖ್ಯಾನ ಮತ್ತು ಅಷ್ಟಾವಧಾನ ಕಾರ್ಯಕ್ರಮ ಮತ್ತು ಶ್ರೀ ಕೆದ್ಲಾಯ ಅವರ ಕಾವ್ಯವಾಚನದ ಸವಿ ನೆನಪಿನೊಂದಿಗೆ, ಆ ಕಾರ್ಯಕ್ರಮದ ಕೆಲವು ಛಾಯಾ ಚಿತ್ರಗಳು ನಿಮಗಾಗಿ......!!





"ಸ್ತುತಿ ರಂಜನಿ " ಕವನ ಸಂಕಲನ ಬಿಡುಗಡೆ


ಅಭಿರುಚಿ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ. ಕೂಡಲಿ ಜಗನ್ನಾಥ ಶಾಸ್ತ್ರಿ ವಿರಚಿತ "ಸ್ತುತಿ ರಂಜನಿ " ಕವನ ಕೃತಿಯನ್ನು ತಿಂಗಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು . ಅ ಕಾರ್ಯಕ್ರಮವನ್ನು ಕುರಿತು ತಮ್ಮ ಹರ್ಷವನ್ನು ಶಿವಮೊಗ್ಗ ಟೈಮ್ಸ್ ಪತ್ರಿಕೆಯಲ್ಲಿ ಓದುಗರೊಬ್ಬರು ಹಂಚಿಕೊಂಡಿದ್ದಾರೆ.  ನೀವು ಈ ಲೇಖನವನ್ನು ಇಲ್ಲಿ ನೋಡಬಹುದು.

("ಇಲ್ಲಿ" ಎಂಬಲ್ಲಿ ಕ್ಲಿಕ್ ಮಾಡಿ ಪತ್ರಿಕೆಯ ಇಮೇಜ್ ಬರುತ್ತದೆ. ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ, open image in new tabಗೆ ಹೋಗಿ ಚಿತ್ರದ ಮೇಲೆ  ಕ್ಲಿಕ್ ಮಾಡಿದರೆ ಅಕ್ಷರಗಳು ದೊಡ್ಡದಾಗಿ ಕಾಣುತ್ತದೆ)   





"ರಾಗ ತರಂಗಿಣಿ"

ಅಭಿರುಚಿ ಸಂಸ್ಥೆ ಪ್ರಸ್ತುತಪಡಿಸುತ್ತಿರುವ "ರಾಗ ತರಂಗಿಣಿ" ಕಾರ್ಯಕ್ರಮದ ಬಗ್ಗೆ ಶ್ರೀಮತಿ ಶಾಲಿನಿ ರಾಮಸ್ವಾಮಿಯವರು, ಶಿವಮೊಗ್ಗ ಟೈಮ್ಸ್ ಪತ್ರಿಕೆಯಲ್ಲಿ ಬರೆದ ಲೇಖನ.




ಅಭಿರುಚಿ ಸಂಸ್ಥೆ ಪ್ರಸ್ತುತಪಡಿಸಿದ  "ರಾಗ ತರಂಗಿಣಿ" ಕಾರ್ಯಕ್ರಮದ ಬಗ್ಗೆ ಶ್ರೀಮತಿ ಪ್ರೊ. ಆಶಾಲತಾರವರು, ಶಿವಮೊಗ್ಗ ಟೈಮ್ಸ್ ಪತ್ರಿಕೆಯಲ್ಲಿ ಬರೆದ ಪ್ರತಿಕ್ರಿಯೆ ಓದಲು ಕೆಳಗಿನ  ಲಿಂಕ್ ನೋಡಿ.
                                                   ರಾಗ ತರಂಗಿಣಿ


“ರಾಗ ತರಂಗಿಣಿ”

ದಿನಾಂಕ 16/02/2014  ಭಾನುವಾರ ಸಂಜೆ 6-೦೦ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಅಭಿರುಚಿ ಸಂಸ್ಥೆಯು ರಾಗ ತರಂಗಿಣಿ ಎಂಬ ನಿಶಿಷ್ಟವಾದ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ.

ಭಾರತೀಯ ಸಂಗೀತದ ವಿವಿಧ ಪ್ರಕಾರಗಳಾದ ಕರ್ನಾಟಕ ಶಾಸ್ತ್ರೀಯ ಸಂಗೀತ , ಹಿಂದುಸ್ಥಾನಿ ಸಂಗೀತ. ಭಾವಗೀತೆ, ಚಿತ್ರಗೀತೆ ಹಾಗೂ ಗಮಕ ಗಾಯನವನ್ನು ಒಂದೇ ವೇದಿಕೆಯಲ್ಲಿ ತಮ್ಮ ಮುಂದಿಡುವ ವಿಶೇಷ ಕಾರ್ಯಕ್ರಮ ಇದಾಗಿದೆ.

                                         
                                         ಬನ್ನಿ ........!!  ವೀಕ್ಷಿಸಿ....... !!! ಆನಂದಿಸಿ........!!!!