ಅಭಯ ವರದೇ ಶಾರದೇ |
ಸರ್ವಾಭಿಷ್ಟ ಸಿದ್ಧಿಪ್ರದೇ ವಿಶಾರದೇ ||ಪ||
ರುಚಿರ ಕಂಗಳ ಮಂದಸ್ಮಿತೇ |
ಚಿತ್ತಾಕರ್ಷಕ ಸಮ್ಮೋದಿತೇ ||
ಸಕಲ ಕಲಾ ವಿಶಾರದೇ ವರದೇ|
ಸಕಲರ ಪಾಲಿಸು ಕರುಣಾ ಕಲ್ಯಾಣಿಯೇ||೧||
ತಾಳ ಮದ್ದಳೆ ಶ್ರುತಿ ಗಾನವಿಲೋಲೆ|
ಮಯೂರ ವಾಹಿನಿ ವೇದ ಶುಕಲೀಲೇ ||
ನರ್ತನ ಕಾವ್ಯ ವಾಚನಾ ಪ್ರಿಯೇ|
ಪೋಷಿಸಿ ರಕ್ಷಿಸೌ "ಅಭಿರುಚಿ"ಯ ತಾಯೇ||೨||
ರಚನೆ : ಮಾನಸ ಶಿವರಾಮಕೃಷ್ಣ
No comments:
Post a Comment